ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆಕುಕ ಇಲಾಖೆ (ಸು.ಆ.ಸು.ಟ್ರ)

×
ಅಭಿಪ್ರಾಯ
ಸಂಕ್ಷಿಪ್ತ ವರದಿ

 

ಪರಿಚಯ

ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸಾ ವಿಧಾನಗಳಿಗೆ ಒದಗಿಸುವ ಒಂದು ನೂತನ ಯೋಜನೆಯನ್ನು ಘೋಷಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಿ ನೌಕರರಿಂದ ಮಾಸಿಕ ವಂತಿಕೆಯನ್ನು ಒಳಗೊಂಡ ʼಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆʼ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮುಖಾಂತರ ಅನುಷ್ಠಾನಗೊಳಿಸಲು ನಿರ್ಧರಿಸಿದೆ. 

 

ಯೋಜನೆಯ ಕುರಿತು

 

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್ಎಸ್) ಕರ್ನಾಟಕ ಸರ್ಕಾರಿ ನೌಕರರಿಗೆ ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನೊಂದಾಯಿತ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ (ಸಾರ್ವಜನಿಕ, ಅನುದಾನಿತ, ಸಾರ್ವಜನಿಕ ಸ್ವಾಯತ್ತ ಮತ್ತು ಖಾಸಗಿ) ನಗದು ರಹಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ ಆಧುನಿಕ ಹಾಗೂ ಭಾರತೀಯ ಔಷಧಿ ಪದ್ದತಿಗಳನ್ನು ಅಳವಡಿಸಿಕೊಳ್ಳಲಾಗಿದೆ.  

ಸರ್ಕಾರಿ ನೌಕರರು ಯೋಜನೆಯಡಿಯಲ್ಲಿ ನೊಂದಣಿಯ ಅರ್ಜಿಯನ್ನು ಮೊಬೈಲ್‌ ಆಪ್‌ ಮೂಲಕ ಅಥವಾ ಅರ್ಜಿಯ ಖಾಯಂ ಪ್ರತಿಯನ್ನು ಅವರ ಮೇಲಧಿಕಾರಿಗಳಿಗೆ (DDO) ಸಲ್ಲಿಸುವುದರ ಮೂಲಕ ನೊಂದಾಯಿಸಿಕೊಳ್ಳಬಹುದು.

ಆರೋಗ್ಯ ಸೇವಾ ಕೇಂದ್ರಗಳು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಜಾಲತಾಣದಲ್ಲಿ ಆನ್‌ಲೈನ್‌ ನೊಂದಣಿ ಅರ್ಜಿಯನ್ನು ಸಲ್ಲಿಸಿ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಬಹುದು.

ಹಂತ 1 ರಲ್ಲಿ ಒಳರೋಗಿ, ತುರ್ತು ಪರಿಸ್ಥಿತಿ, ಆಂಬುಲ್ನೆಸ್‌ ಸೇವೆಗಳು, ಹಗಲು ಚಿಕಿತ್ಸೆ, ಕಣ್ಣು ಹಾಗೂ ದಂತ ಚಿಕಿತ್ಸೆಗಳು ಲಭ್ಯವಿರುತ್ತದೆ. ಒಳರೋಗಿಗಳಿಗೆ ಡಿರ್ಸ್ಚಾರ್ಜ್‌ ಆಗುವ ಸಮಯದಲ್ಲಿ ಅಗತ್ಯ ಔಷಧಿಗಳನ್ನು ಪೂರೈಸಲಾಗುವುದು.

ಆಯುಷ್ ಮತ್ತು ಪ್ರಕೃತಿ ಚಿಕಿತ್ಸೆಯು ಎಲ್ಲಾ ಸಾರ್ವಜನಿಕ, ಅನುದಾನಿತ, ಸಾರ್ವಜನಿಕ ಸ್ವಾಯತ್ತ ಮತ್ತು ಖಾಸಗಿ ನೊಂದಾಯಿತ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ನಗದು ರಹಿತವಾಗಿ ಲಭ್ಯವಿರುತ್ತದೆ.

ಹಗಲು ಚಿಕಿತ್ಸೆಗಳಲ್ಲಿ ಕೆಳಕಂಡ ಚಿಕಿತ್ಸೆಗಳು ಲಭ್ಯವಿರುತ್ತದೆ. (ಒಳಗೊಂಡಿದೆ ಆದರೆ ಸೀಮಿತವಾಗಿಲ್ಲ-) 

ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳ ಸವಲತ್ತುಗಳು