ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆಕುಕ ಇಲಾಖೆ (ಸು.ಆ.ಸು.ಟ್ರ)

×
ಅಭಿಪ್ರಾಯ
ಫಲಾನುಭವಿಗಳ ನೊಂದಣಿ
ಆಯ್ಕೆ ೧
ಆಯ್ಕೆ ೨

ಯೋಜನೆಯಡಿಯಲ್ಲಿ ಸರ್ಕಾರಿ ನೌಕರರು ನೊಂದಾಯಿಸಿಕೊಳ್ಳಲು ಲಿಖಿತ ಮನವಿಯನ್ನು ಸಲ್ಲಿಸುವ ಬಗ್ಗೆ.

ಫಲಾನುಭವಿಗಳು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಸ್‌ ಎಂ ಆರ್‌ 2020 ಭಾಗ 5 ದಿ: 09.03.2023 ರ ಅನುಬಂಧ ೧ ರಲ್ಲಿ ಸೂಚಿಸಿರುವ ಫಾರಂ ʼಎʼ ರಲ್ಲಿ ಲಭ್ಯವಿರುವ ಎಲ್ಲಾ ಕಾಲಂಗಳನ್ನು ಭರ್ತಿ ಮಾಡಿ ದ್ವಿಪ್ರತಿಯಲ್ಲಿ ತನ್ನ ಕಛೇರಿಯ ಮುಖ್ಯಸ್ಥರ (ನೌಕರನ ಸೇವಾ ವಹಿಯನ್ನು ನಿರ್ವಹಿಸುವ ಕಛೇರಿ) / ವರದಿ ಮಾಡಿಕೊಳ್ಳುವ ಅಧಿಕಾರಿ ಮುಖಾಂತರ ಡಿಡಿಒ ಗೆ ಸಲ್ಲಿಸತಕ್ಕದ್ದು ಹಾಗೂ ಫಾರಂ ಎ ಜೊತೆಗೆ ಕೆಳಕಂಡ  ಲಗತ್ತುಗಳನ್ನು ಸಲ್ಲಿಸತಕ್ಕದ್ದು. (ಯೋಜನೆಯಡಿಯಲ್ಲಿ ನೊಂದಾಯಿಸಿಕೊಳ್ಳಲು ನಿಗಧಿಪಡಿಸಲಾದ ಫಾರಂ ಎ ಡೌನ್‌ಲೋಡ್ಸ ನಲ್ಲಿ ಲಭ್ಯವಿದೆ).

               

  1. ಸರ್ಕಾರಿ ನೌಕರನ ಹಾಗೂ ಕುಟುಂಬದ ಅರ್ಹ ಸದಸ್ಯರ ಮುಖದ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, 50 ಕೆ.ಬಿ ಒಳಗಿರುವ (ಪ್ರತಿಯೊಬ್ಬರ ಭಾವಚಿತ್ರವನ್ನು ಪ್ರತ್ಯೇಕವಾಗಿ) ಭಾವಚಿತ್ರದ ಮೇಲೆ ಸರ್ಕಾರಿ ನೌಕರರ ಸಹಿ ಮತ್ತು ದಿನಾಂಕವನ್ನು ನಮೂದಿಸತಕ್ಕದ್ದು ಮತ್ತು ಪ್ರತಿ 5 ವರ್ಷಕ್ಕೊಮ್ಮೆ ಹೊಸ ಭಾವಚಿತ್ರವನ್ನು ಒದಗಿಸತಕ್ಕದ್ದು.
  2. ಜನ್ಮ ದಿನಾಂಕದ ದಾಖಲೆಗಳು (ಅವಲಂಬಿತ ಮಕ್ಕಳು)
  3. ಆಧಾರ್‌ ಕಾರ್ಡ್‌ (ಪ್ರತಿಯೊಬ್ಬ ಫಲಾನುಭವಿ)
  4. ವೇತನ ಚೀಟಿ (ಸರ್ಕಾರಿ ನೌಕರನ)
  5. ಕಾನೂನು ದಾಖಲೆಗಳು (ದತ್ತು, ವಿವಾಹ, ಇತ್ಯಾದಿ ಸಂದರ್ಭಗಳಲ್ಲಿ)
  6. ಸಂಬಂಧಪಟ್ಟ ಫಾರಂ ಎ(1), ಫಾರಂ ಎ(2), ಫಾರಂ ಎ(3) ನಲ್ಲಿ ಇರುವ ಸ್ವಯಂ ಘೋಷಣಾ ಪತ್ರ

Hand Book to DDOs for Enrolment of Beneficiaries

ಯೋಜನೆಯಡಿಯಲ್ಲಿ ಸರ್ಕಾರಿ ನೌಕರರು ನೊಂದಾಯಿಸಿಕೊಳ್ಳಲು ಮೊಬೈಲ್‌ ಮೂಲಕ ಮನವಿಯನ್ನು ಸಲ್ಲಿಸುವ ಬಗ್ಗೆ.

ಫಲಾನುಭವಿಗಳು ಮೊದಲು https://hrms.karnataka.gov.in ವೆಬ್‌ ಸೈಟ್‌ನಲ್ಲಿ ಲಾಗಿನ್‌ ಆಗಿ, Download KASS Mobile App ಲಿಂಕನ್ನು ಸೆಲೆಕ್ಟ್‌ ಮಾಡಿ ಅಪ್ಲಿಕೇಷನ್‌ ನ್ನು ನಿಮ್ಮ ಮೊಬೈಲ್‌ಗೆ  ಡೌನ್‌ಲೋಡ್‌ ಮಾಡಿಕೊಳ್ಳತಕ್ಕದ್ದು.

ಹೊಸ ಬಳಕೆದಾರರು : ಮೊದಲು ಆಪ್‌ ನಲ್ಲಿ ರಿಜಿಸ್ಟರ್‌ ಮಾಡಿಕೊಂಡು, ಪಾಸ್‌ವರ್ಡ್‌ ನ್ನು ನೊಂದಾಯಿಸಿಕೊಳ್ಳಬೇಕು. ಹೊಸ ಪಾಸ್‌ವರ್ಡ್‌ ಬಳಸಿಕೊಂಡು ಪುನಃ ಲಾಗಿನ್‌ ಆಗಬೇಕು. ನಂತರ  ಅವಲಂಬಿತ ಸದಸ್ಯರ ವಿವರಗಳನ್ನು ತುಂಬತಕ್ಕದ್ದು. ಅವಶ್ಯಕತೆ ಇದ್ದಲ್ಲಿ ಅವಲಂಬಿತರ ವಿವರಗಳನ್ನು ತಿದ್ದಬಹುದು ಮತ್ತು ಪಟ್ಟಿಗೆ ಸೇರಿಸಬಹುದು ಅಥವಾ ಪಟ್ಟಿಯಿಂದ ತೆಗೆಯಬಹುದು. ನಂತರ ಸರ್ಕಾರಿ ನೌಕರನ ಸ್ವಯಂ ಘೋಷಣಾ ಪತ್ರವನ್ನು Mobile Application ನಲ್ಲಿ ಅಪ್‌ಲೋಡ್‌ ಮಾಡತಕ್ಕದ್ದು ಹಾಗೂ   ಅನುಬಂಧ 1 ರಲ್ಲಿ ವಿವರಗಳನ್ನು ಭರ್ತಿ ಮಾಡಿ, ದ್ವಿಪ್ರತಿಯಲ್ಲಿ ವರದಿ ಮಾಡಿಕೊಳ್ಳುವ ಅಧಿಕಾರಿ ಮುಖಾಂತರ ತಮ್ಮ ಡಿಡಿಓಗಳಿಗೆ ಸಲ್ಲಿಸತಕ್ಕದ್ದು. 

 

                                                             

ಹೈಪರ್‌ ಲಿಂಕ್ Mobile App for Enrolment link

Enrollment user Manual for Mobile Application